Ticker

6/recent/ticker-posts

Header Ads Widget

Responsive Advertisement

ನಾಳೆ ಗೋಚರ ಆಗಲಿದೆ ಈ ವರ್ಷದ ಮೊದಲ ಸೂರ್ಯ ಗ್ರಹಣ - ಪುತ್ತೂರು ನ್ಯೂಸ್

 


 


ನಾಳೆ ಈ ವರ್ಷದ ಮೊದಲ ಸೂರ್ಯಗ್ರಹಣ

ಸೂರ್ಯ ಗ್ರಹಣ 2021: ಈ ವರ್ಷದ ಮೊದಲ ಸೂರ್ಯ ಗ್ರಹಣ ಇದನ್ನು ಎಲ್ಲರೂ ನೋಡುವುದಿಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕದ ನಾಸಾ ಹೇಳಿದೆ. ಜಗತ್ತಿನ ಕೆಲವೇ ಭಾಗದಲ್ಲಿ ಮಾತ್ರ ಈ ಗ್ರಹಣ ಗೋಚರ ಆಗಲಿದೆ. ಭೂಮಿ ಹಾಗೂ ಸೂರ್ಯನ ಮಧ್ಯೆ ಚಂದ್ರ ಹಾದು ಹೋಗುವಾಗ ಈ ಸೂರ್ಯ ಗ್ರಹಣ ಸಂಭವಿಸುತ್ತದೆ. ಅಂದಹಾಗೆ ಸೂರ್ಯನನ್ನು ಚಂದ್ರ ಸಂಪೂರ್ಣವಾಗಿ ಮರೆ ಮಾಡುವುದಿಲ್ಲ. ಈ ಸೂರ್ಯ ಗ್ರಹಣದ ದೃಶ್ಯವು ಬೆಂಕಿಯ ಉಂಗುರದಂತೆ ಕಾಣುತ್ತದೆ. ನಾಸಾದಿಂದ ಇಂಟರ್​ ಆ್ಯಕ್ಟಿವ್ ಮ್ಯಾಪ್ ಆರಂಭಿಸಲಾಗಿದೆ. ಇದು 2021ರ ಸೂರ್ಯ ಗ್ರಹಣವು ಭೂಮಿಯ ಮೇಲ್ಮೈಯಲ್ಲಿ ಹೇಗೆ ಸಾಗುತ್ತದೆ ಎಂಬ ಹಾದಿಯನ್ನು ತೋರುತ್ತದೆ. ಇದರಲ್ಲಿ ಇರುವಂತೆ, ಭಾರತದಲ್ಲಿ ಸೂರ್ಯ ಗ್ರಹಣ ಕಾಣಿಸಿಕೊಳ್ಳುವುದು ಹೌದು. ಆದರೆ ಅದು ಲಡಾಕ್ ಮತ್ತು ಅರುಣಾಚಲ ಪ್ರದೇಶದಲ್ಲಿ ಮಾತ್ರ. ಮಧ್ಯಾಹ್ನ 12.25ಕ್ಕೆ ಕಾಣಲು ಆರಂಭವಾಗುತ್ತದೆ. ಭಾಗಶಃ ಸೂರ್ಯಗ್ರಹಣ ಮಾತ್ರ ನೋಡಲು ಆಗುತ್ತದೆ. ಮಧ್ಯಾಹ್ನ 12.51ಕ್ಕೆ ಕೊನೆಯಾಗುತ್ತದೆ.

ನಾಸಾ ತಿಳಿಸಿರುವಂತೆ, ಪೂರ್ವ ಅಮೆರಿಕ, ಉತ್ತರ ಅಲಾಸ್ಕಾ, ಕೆನಡಾ ಮತ್ತು ಕೆರಬಿಯನ್​ನ ಕೆಲ ಭಾಗ, ಯುರೋಪ್, ಏಷ್ಯಾ ಮತ್ತು ಆಫ್ರಿಕಾದ ಉತ್ತರ ಭಾಗದಲ್ಲಿ ಕೂಡ ಜೂನ್​ 10ನೇ ತಾರೀಕಿನಂದು ಭಾಗಶಃ ಸೂರ್ಯ ಗ್ರಹಣ ಕಾಣುತ್ತದೆ. ಸೂರ್ಯ ಹುಟ್ಟುವ ಮುಂಚೆ, ಸಂದರ್ಭದಲ್ಲಿ ಹಾಗೂ ಆ ನಂತರದ ಕೆಲ ಸಮಯ ಗ್ರಹಣ ಸಂಭವಿಸುತ್ತದೆ. ಹಲವು ಪ್ರದೇಶಗಳಲ್ಲಿ ಈ ವಾರ್ಷಿಕ ಗ್ರಹಣವು ಮಧ್ಯಾಹ್ನ 1.42ಕ್ಕೆ ಆರಂಭವಾಗಿ ಸಂಜೆ 6.41ರ ತನಕ ಇರುತ್ತದೆ.

 



Post a Comment

0 Comments