Ticker

6/recent/ticker-posts

Header Ads Widget

Responsive Advertisement

ದೇವಸ್ಥಾನದ ಹಣದಿಂದ ಮಸೀದಿಗೆ ತಸ್ತೀಕ್ - ಹಿಂಜಾವೇ ಖಂಡನೆ

 


 


ರಾಜ್ಯದಲ್ಲಿ   ಕೊರೊನಾ ಸೋಂಕಿನಿಂದಾಗಿ ಅರ್ಚಕ ವರ್ಗಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಸರಕಾರದಿಂದ ತಸ್ತಿಕ್ ಭತ್ತೆ ನೀಡಲು ಆದೇಶಿಸಿರುವ ನಿರ್ಧಾರ ಸ್ವಾಗತಾರ್ಹ.
 ಆದರೆ ಅದೇ ಆದೇಶದ ಪ್ರಕಾರ ತಸ್ತಿಕ್ ಹಣವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ 41 ಮಸೀದಿ, ಮದರಸದ ಮೌಲ್ವಿಗಳಿಗೆ ನೀಡಲು ನಿರ್ಧಾರ ಮಾಡಿರುವುದು ಖಂಡನೀಯ ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ಹೇಳಿದ್ದಾರೆ.

ದೇವಸ್ಥಾನ ಹಣವನ್ನು ಮಸೀದಿಗೆ ನೀಡುವುದು ಖಂಡನೀಯವಾಗಿದೆ, ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ. ದೇವಸ್ಥಾನ, ದೈವಸ್ಥಾನಗಳ ಹಣವನ್ನು ಹಿಂದೂಗಳಿಗೆ ಮತ್ತು ದೇವಸ್ಥಾನದ ಕಾರ್ಯಗಳಿಗೆ ಮಾತ್ರ ಉಪಯೋಗಿಸಬೇಕು ವಿನಹ ಮಸೀದಿ, ಮದರಸಗಳಿಗೆ ಉಪಯೋಗಿಸುವುದನ್ನು ಹಿಂದೂ ಜಾಗರಣ ವೇದಿಕೆ ಖಂಡಿಸುತ್ತದೆ ಎಂದು ಹೇಳಿದರು.

 



Post a Comment

0 Comments