ಪುತ್ತೂರು:ಜೂ 6 : ಕೊರೊನಾ ಸೋಂಕು ದೃಢಪಟ್ಟಿದ್ದ ಪುತ್ತೂರಿನ ಅಟೋ ಚಾಲಕರೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಜೂ.5ರಂದು ಮೃತಪಟ್ಟಿದ್ದಾರೆ.
ಆಟೋ ಚಾಲಕರಾಗಿದ್ದ ಬನ್ನೂರು ನಿವಾಸಿ ಜಗದೀಶ್ ಹೆಗ್ಡೆ(35ವ.) ನಿಧನ ಹೊಂದಿದವರು . ಮೃತರು ಪತ್ನಿ, ಪುತ್ರಿ ಮತ್ತು 9 ತಿಂಗಳ ಗಂಡು ಮಗುವನ್ನು ಅಗಲಿದ್ದಾರೆ.
ಮೂಲತಃ ತಾರಿಗುಡ್ಡೆ ನಿವಾಸಿಯಾಗಿರುವ ಜಗದೀಶ್ ಹೆಗ್ಡೆ ಅವರು ಬನ್ನೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು ಇತ್ತೀಚಿಗೆ ಅನಾರೋಗ್ಯಕ್ಕೆ ಒಳಗಾದ ಅವರನ್ನು ಮಂಗಳೂರಿನ ಕೊವೀಡ್ ಆಸ್ಪತ್ರೆ ವೆನ್ಲಾಕ್ ಗೆ ದಾಖಲಿಸಲಾಗಿತ್ತು . ಅಲ್ಲಿ ತಪಾಸಣೆ ವೇಳೆ ಅವರಿಗೆ ಕೊರೊನಾ ದೃಢಪಟ್ಟಿತ್ತು.





0 Comments