Ticker

6/recent/ticker-posts

Header Ads Widget

Responsive Advertisement

ಕಾರಾಗೃಹದ ಗೋಡೆ ಕುಸಿದು ಕೈದಿಗಳಿಗೆ ಗಾಯ - ಪುತ್ತೂರು ನ್ಯೂಸ್

 


 


ಭೋಪಾಲ್: ಕಾರಾಗೃಹದ ಗೋಡೆ ಕುಸಿದು 22 ಕೈದಿಗಳು ಗಂಭೀರ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ.

ಇಂದು ಬೆಳಗ್ಗೆ 5.10ರ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕಾರಾಗೃಹದ ನಂ.6ನೇ ಕೊಠಡಿಯ ಗೋಡೆ ಕುಸಿದುಬಿದ್ದಿದೆ. 22 ಕೈದಿಗಳು ಗಾಯಗೊಂಡಿದ್ದಾರೆ. ಅದರಲ್ಲಿ ಒಬ್ಬ ಕೈದಿಗೆ ಗಂಭೀರವಾಗಿ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಗ್ವಾಲಿಯರ್​ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದವರಿಗೆ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಿಂಡ್ ಎಸ್‍ಪಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ. 

ದುರ್ಘಟನೆ ನಡೆಯುವ ಸಂದರ್ಭದಲ್ಲಿ ಕಾರಾಗೃಹದಲ್ಲಿ 225 ಕೈದಿಗಳು ಇದ್ದರು. ಗೋಡೆ ಕುಸಿತದ ಸುದ್ದಿ ಕೇಳುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಶುರು ಮಾಡಿದರು. ಕಾರಾಗೃಹದ ಕಟ್ಟಡ ಅತ್ಯಂತ ಹಳೆಯದಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಗೋಡೆಗಳೆಲ್ಲ ಒದ್ದೆಯಾಗಿದ್ದವು. ಇದೇ ಕಾರಣಕ್ಕೆ ಕುಸಿದುಬಿದ್ದಿವೆ ಎಂದೂ ಹೇಳಿದ್ದಾರೆ.

 



Post a Comment

0 Comments