ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ IQAC,ವಾಣಿಜ್ಯ ವಿಭಾಗದ ವತಿಯಿಂದ ಹಣಕಾಸು ಮಾರುಕಟ್ಟೆ ಎಂಬ ವಿಷಯದ ಬಗ್ಗೆ ಆನ್ಲೈನ್ ವೇಬಿನಾರ್ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಹ.ಪ್ರಾಧ್ಯಾಪಕರಾಗಿರುವ ಡಾ.ಶರಣ್ ಕುಮಾರ್ ಶೆಟ್ಟಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ಪೂರಕವಾದ ಹಣ ಗಳಿಕೆ ಮತ್ತು ಉಳಿಕೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರು,IQAC ಸಂಯೋಜಕರಾದ ಹರಿಪ್ರಸಾದ್ ಎಸ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಈ ಕಾರ್ಯಕ್ರಮ ಗೂಗಲ್ ಮೀಟ್ ಮೂಲಕ ನಡೆಯಿತು,ಯೂಟ್ಯೂಬ್ ನಲ್ಲಿ ನೇರ ಪ್ರಸಾರ ಗೊಂಡಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ ವಹಿಸಿದರು.ಕಾಲೇಜಿನ ವಾಣಿಜ್ಯ ಸಂಘದ ಸಂಚಾಲಕರಾದ ದೀಕ್ಷಿತ್ ಕುಮಾರ್ ಹಾಗೂ ಇತರ ಉಪನ್ಯಾಸಕರು,ವಿದ್ಯಾರ್ಥಿಗಳು. ಭಾಗವಹಿಸಿದರು.ಮಹೇಶ್ ಸ್ವಾಗತಿಸಿದರು.ಜೀವನ್ ಜಿ ಸಂಪನ್ಮೂಲ.ವ್ಯಕ್ತಿಗಳ ಪರಿಚಯ ಮಾಡಿದರು, ರೇಷ್ಮಾ ವಂದಿಸಿದರು.ಅಶ್ವಿನಿ ಕೆ ಕಾರ್ಯಕ್ರಮವನ್ನು ನಿರೂಪಿಸಿದರು.





0 Comments