Ticker

6/recent/ticker-posts

Header Ads Widget

Responsive Advertisement

ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಮಡಿಕೇರಿ ಆಕಾಶವಾಣಿ ಟವರ್ ನ ತಡೆಗೋಡೆ ಕುಸಿತ | retention wall - ಪುತ್ತೂರು ನ್ಯೂಸ್

 


 


ಕೊಡಗು ಜಿಲ್ಲೆಯಾದ್ಯಂತ  ಸುರಿಯುತ್ತಿರುವ ಧಾರಕಾರ  ಮಳೆಯಿಂದಾಗಿ ಮಡಿಕೇರಿ ಆಕಾಶವಾಣಿ ಟವರ್ ನ ತಡೆಗೋಡೆ ಕುಸಿದಿದೆ. ಕಳೆದೆರಡು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಕೊಡಗು ತತ್ತರಿಸಿದೆ. ಇಂದು ಆಕಾಶವಾಣಿಯ ಟವರ್ ನ ತಡೆಗೋಡೆ ಕುಸಿದಿದ್ದು
ಕಳೆದ ವರ್ಷದ ಮಳೆ ಕುಸಿದ  ತಡೆಗೊಡೆಯನ್ನು  ಮರು ನಿರ್ಮಿಸಲಾಗಿತ್ತು.  ಇನ್ನು ತಾಲತ್ ಮನೆ ಬಳಿ ಗುಡ್ಡ ಕುಸಿತವಾಗಿ 6 ಮನೆಗಳ ಸಂಪರ್ಕ ಕಡಿತವಾಗಿದೆ.

ಕೊಡಗಿನ  ತಲ ಕಾವೇರಿ ತುಂಬಿ ಹರಿಯಿತ್ತಿದ್ದು ಹಲವೆಡೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಕಳೆದೆರಡು ವರ್ಷಗಳಿಂದ ಕೊಡಗಿನಲ್ಲಿ ಭಾರಿ ಮಳೆಗೆ ಗುಡ್ಡ ಕುಸಿತ ಉಂಟಾಗುತ್ತಿದ್ದು ಈ ವರ್ಷವೂ  ಗುಡ್ಡ  ಕುಸಿಯಲಾರಂಭಿಸಿವೆ. 
ಇದಿಗ ಕಳೆದ ಎರಡು ದಿನಗಳಿಂದ ಆರ್ಭಟಿಸುತ್ತಿರುವ ಗಾಳಿ ಮಳೆಯಿಂದ ಟವರ್ ಕುಸಿಯುವ ಭೀತಿಯಿಂದ ಆಸುಪಾಸಿನ ಜನರಲ್ಲಿ ಆತಂಕ ಹುಟ್ಟುವಂತೆ ಮಾಡಿದೆ.

ವರದಿ : ಮೋವಿನ್ ಕುಮಾರ್

 



Post a Comment

0 Comments