Ticker

6/recent/ticker-posts

Header Ads Widget

Responsive Advertisement

ಪೆರ್ಲಂಪಾಡಿ ಷಣ್ಮುಖದೇವ ಭಜನಾ ಮಂದಿರದ ವಠಾರದಲ್ಲಿ ಗಣಹೋಮ ಹಾಗೂ ಭಜನಾ ಕಾರ್ಯಕ್ರಮ

 


 


ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಷಣ್ಮುಖದೇವ ಭಜನಾ ಮಂದಿರದ ವಠಾರದಲ್ಲಿ ವರ್ಷಂಪ್ರತಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಈ ಬಾರಿ Covid-19 ಹಾವಳಿಯಿಂದಾಗಿ ಇಂದು ಬೆಳಿಗ್ಗೆ ಗಣಪತಿ ಹೋಮ ಮತ್ತು ಶ್ರೀ ಆದಿಶಕ್ತಿ ಮಹಿಳಾ ಭಜನಾ ಮಂಡಳಿ ಪೆರ್ಲಂಪಾಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಊರ - ಪರವೂರ ಭಗವದ್ಭಕ್ತರು ಹಲವು ವರ್ಷಗಳಿಂದ ನಮ್ಮೊಂದಿಗೆ ಸಹಕರಿಸುತ್ತಿದ್ದು ನಿಮ್ಮೆಲ್ಲರ ಸಹಕಾರಕ್ಕೆ ನಾವು ಅಬಾರಿಯಾಗಿದ್ದೇವೆ. ಮುಂಬರುವ ದಿನಗಳಲ್ಲಿ ಕೊರೊನಾ ಮಹಾಮಾರಿ ರೋಗ ಇಡೀ ವಿಶ್ವದಿಂದ ನಿರ್ಮೂಲನವಾಗಲಿ ಮತ್ತು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಶ್ರೀ ವಿಘ್ನ ನಿವಾರಕ ಶ್ರೀ ಗಣಪತಿ ದೇವರಲ್ಲಿ ಪ್ರಾರ್ಥಿಸೋಣ.
ಈ ಸಂದರ್ಭದಲ್ಲಿ ಷಣ್ಮುಖದೇವ ಭಜನಾ ಮಂಡಳಿ ಮತ್ತು ಯಕ್ಷಗಾನ ಕಲಾಕೂಟ ಪೆರ್ಲಂಪಾಡಿ ಪದಾಧಿಕಾರಿಗಳು ಮತ್ತು ಹಿಂದು ಜಾಗರಣವೇದಿಕೆ ಪೆರ್ಲಂಪಾಡಿ ಪದಾಧಿಕಾರಿಗಳು, ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

 



Post a Comment

0 Comments