Ticker

6/recent/ticker-posts

Header Ads Widget

Responsive Advertisement

ಪುತ್ತೂರು ನಗರಸಭೆಯ ನೂತನ ಪೌರಾಯುಕ್ತರಾಗಿ ಮಧು ಎಸ್.ಎಂ

 


 


ಪುತ್ತೂರು ನಗರಸಭಾ ಪೌರಾಯುಕ್ತರಾಗಿ ಚಿಕ್ಕಮಗಳೂರು ನಗರಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ(ಪರಿಸರ) ಕರ್ತವ್ಯ ನಿರ್ವಹಿಸುತ್ತಿರುವ ಮಧು ಎಸ್.ಎಂ. ರವರನ್ನು ವರ್ಗಾವಣೆಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ನೀಡಿದೆ. 

ಸುದೀರ್ಘ ನಾಲ್ಕೂವರೆ ವರ್ಷ ಪುತ್ತೂರು ನಗರಸಭೆಯಲ್ಲಿ ಪೌರಾಯುಕ್ತರಾಗಿರುವ ರೂಪಾ ಶೆಟ್ಟಿಯವರು ಕಾರ್ಕಳ ಪುರಸಭೆಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ಈ ನೇಮಕ ನಡೆದಿದೆ. ಮೇ.27ರಂದು ಮಧುಮನೋಹರ್‌ರವರು ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ. ಇವರು ಮಂಗಳೂರು ಮಹಾನಗರ ಪಾಲಿಕೆಯಿಂದ ಮುಂಭಡ್ತಿ ಹೊಂದಿ ಚಿಕ್ಕಮಗಳೂರು ನಗರಸಭೆಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಮೂಲಕ ಪುತ್ತೂರಿನಲ್ಲಿ ಪೌರಾಯುಕ್ತರಾಗಿ ಕಾರ್ಯನಿರ್ವಹಿಸಲಿದ್ದಾರೆ.

 



Post a Comment

0 Comments