Ticker

6/recent/ticker-posts

Header Ads Widget

Responsive Advertisement

ಅನ್ ಲಾಕ್ 4.0 ಮಾರ್ಗಸೂಚಿ ಬಿಡುಗಡೆ - ಪುತ್ತೂರು ನ್ಯೂಸ್

 


 


ಕರ್ನಾಟಕ :ರಾಜ್ಯದಲ್ಲಿ ನಾಳೆಯಿಂದ ಶೇ.50 ರಷ್ಟು ಸೀಟ್‌ಗಳ ಭರ್ತಿಯೊಂದಿಗೆ ಸಿನಿಮಾ ಮಂದಿರ ತೆರೆಯುವುದಕ್ಕೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ನೇತೃತ್ವದಲ್ಲಿ ಅನ್‌ಲಾಕ್ 4.0 ಮಾರ್ಗಸೂಚಿ ಕ್ರಮಗಳ ಜಾರಿ ಕುರಿತಂತೆ ಮಹತ್ವದ ಸಭೆ ನಡೆಯಿತು.

ಈ ಸಭೆಯಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ನೈಟ್‌ಕರ್ಫ್ಯೂ ಜಾರಿಗೊಳಿಸಲು ಹಾಗೂ ಜುಲೈ 26 ರಿಂದ ಪದವಿ ತರಗತಿಗಳನ್ನು ತೆರೆಯುವುದಕ್ಕೆ ಅವಕಾಶ ನೀಡಲಾಗಿದೆ. ಕಾಲೇಜು ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಹಾಗೂ ಸಿಬ್ಬಂದಿಗಳಿಗೆ ಕೊರೋನಾ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

 



Post a Comment

0 Comments